ಪಿಎಸ್‍ಐ ಅಕ್ರಮ ಪ್ರಕರಣದಲ್ಲಿ ಬಂಧಿತ ಅಮೃತ್ ಪೌಲ್ ಮೇಲಿರುವ ಆರೋಪಗಳೇನು..? ಕೋರ್ಟ್‍ಗೆ ಸಿಐಡಿ ಮಾಡಿಕೊಂಡ ನಿವೇದನೆ ಏನು ಎಂಬ ಎಕ್ಸ್‍ಕ್ಲೂಸಿವ್ ಮಾಹಿತಿ ಪಬ್ಲಿಕ್ ಟಿವಿಗೆ ಸಿಕ್ಕಿದೆ. ಪ್ರಕರಣ ಗಂಭೀರ ಸ್ವರೂಪದಾಗಿದ್ದು, ಪೊಲೀಸ್ ಇಲಾಖೆಯ ಘನತೆಗೆ ಕುಂದು ತರುವಂತೆ ಕಂಡು ಬರುತ್ತಿದೆ. ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯಾಗಿದ್ದು, ಜಾಮೀನಿನ ಮೇಲೆ ಬಿಟ್ಟರೆ ತಪ್ಪು ಸಂದೇಶ ರವಾನೆ ಮಾಡಿದಂತಾಗುತ್ತದೆ. ಪ್ರಕರಣದ ಎ31 ಆರೋಪಿ ಶಾಂತಕುಮಾರ್ ನೇಮಕಾತಿ ವೇಳೆ ಸುಮಾರು 5 ಕೋಟಿ ಹಣಕಾಸು ವ್ಯವಹಾರದ ಬಗ್ಗೆ ಬಾಯ್ಬಿಟ್ಟಿದ್ದು, ಹೆಚ್ಚಿನ ತನಿಖೆ ನಡೆಸಬೇಕಿದೆ. ಆರೋಪಿ ಅಧಿಕಾರಿ ಓಎಂಆರ್ ಶೀಟ್ ಇಡುವ ಕಿಟ್ ಬಾಕ್ಸ್ ಅಲ್ಮೇರಾ ಕೀ ತನಗೆ ನೀಡಿದ್ದ ಎಂದು ಶಾಂತಕುಮಾರ್ ಬಾಯ್ಬಿಟ್ಟಿದ್ದಾನೆ. ಅಮೃತ್ ಪೌಲ್ ಜೊತೆ ಬೇರೆ ಯಾವ ಅಭ್ಯರ್ಥಿಗಳು, ಮಧ್ಯವರ್ತಿಗಳು, ಸರ್ಕಾರಿ ಅಧಿಕಾರಿಗಳು ಸಂಪರ್ಕ ಹೊಂದಿದ್ದಾರೆ ಅನ್ನೋದನ್ನ ತನಿಖೆ ನಡೆಸಬೇಕಿದೆ. ಪ್ರಕರಣದಲ್ಲಿ ಅನೇಕ ಪ್ರಭಾವಶಾಲಿಗಳು ಒಳಗೊಂಡಿರುವ ಬಗ್ಗೆ ಶಂಕೆ ಇದ್ದು, ಪ್ರಕರಣ ಸಮಾಜದ ಸ್ವಾಸ್ಥ್ಯ ಹಾಳುಮಾಡುವ ತೀವ್ರ ಸ್ವರೂಪದ್ದಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಭಾವಶಾಲಿಗಳನ್ನ ಬಂಧಿಸಬೇಕಿದೆ. ಹೀಗೆ 17 ಅಂಶಗಳುಳ್ಳ ರಿಮ್ಯಾಂಡ್ ಅಪ್ಲಿಕೇಷನ್ ಸಲ್ಲಿಸಿ ಅಮೃತ್ ಪಾಲ್ ವಶಕ್ಕೆ ಪಡೆಯಲಾಗಿದೆ.<br /><br />#publictv #newscafe #hrranganath th